top of page

10 Years of Be Good Do Good

Inside Banner (1).jpg

ರಾಜ್ಯಮಟ್ಟದ ಯುವ ಅಭಿಯಾನಕ್ಕೆ 10ನೇ ವರ್ಷದ ಸಂಭ್ರಮ

ಯುವಕರು ರಾಷ್ಟ್ರಪರಿವರ್ತನೆಯ ಹರಿಕಾರರು.

ಯುವಜನರು ತಮ್ಮ ವೈಯಕ್ತಿಕ ಜೀವನದಲ್ಲಿಉತ್ತಮ ಮೌಲ್ಯಗಳನ್ನು ಅಳವಡಿಸಿಕೊಂಡು, ಅವರಲ್ಲಿ ಸಾಮಾಜಿಕ ಸೇವಾಪ್ರಜ್ಞೆಯನ್ನು ಪೋಷಿಸುವ ಉತ್ತಮನಾಗು-ಉಪಕಾರಿಯಾಗು ಎಂಬ ಸ್ವಾಮಿ ವಿವೇಕಾನಂದರ ಜೀವನ ಸಂದೇಶವನ್ನು ಸಾರುವ ಹದಿನೈದು ದಿನಗಳ ವಾರ್ಷಿಕ ರಾಜ್ಯಮಟ್ಟದ ಬಿ ಗುಡ್ ಡು ಗುಡ್ Be Good Do Good ಯುವ ಅಭಿಯಾನವು ಹತ್ತನೇ ವರ್ಷಕ್ಕೆ ಕಾಲಿಟ್ಟಿದೆ. ರಾಜ್ಯದ ವಿವಿಧ ಶೈಕ್ಷಣಿಕ, ಸಾಮಾಜಿಕ ಸಂಸ್ಥೆ- ಸಂಘಟನೆಗಳ ಸಹಭಾಗಿತ್ವದೊಂದಿಗೆ 'ಸಮರ್ಥ ಭಾರತ'ವು ಈ ಯುವ ಅಭಿಯಾನವನ್ನು ಆಯೋಜಿಸುತ್ತಿದೆ.

 

2015ರ ಜನವರಿ 12ರ ಸ್ವಾಮಿ ವಿವೇಕಾನಂದರ ಜಯಂತಿಯಂದು ಪ್ರಾರಂಭಗೊಂಡ 'ವಿವೇಕ್‌ ಬ್ಯಾಂಡ್‌' ಯುವ ಅಭಿಯಾನವು 2019ರಿಂದ 'ಬಿ ಗುಡ್ಡು ಗುಡ್' ಎಂದು ಕರೆಯಲ್ಪಡುತ್ತಿದೆ. ಪ್ರತಿವರ್ಷ ಜನವರಿ 12ರಿಂದ ಜನವರಿ 26ರ ತನಕ 15 ದಿನಗಳ ಕಾಲ ರಾಜ್ಯಾದ್ಯಂತ ನಡೆಯುವ ಈ ಯುವ ಅಭಿಯಾನದಲ್ಲಿ ಯುವಕ-ಯುವತಿಯರು ಭಾಗವಹಿಸಿ ಸ್ವಾಮಿ ವಿವೇಕಾನಂದರು ಯುವಜನರಿಗೆ ನೀಡಿದ 'ಉತ್ತಮನಾಗು-ಉಪಕಾರಿಯಾಗು' (BE GOOD - DO GOOD) ಎಂಬ ಸಂದೇಶವನ್ನು ತಾವು ಪಾಲನೆ ಮಾಡುವ ಸಂಕಲ್ಪ ತೊಡುತ್ತಾರೆ. ಈ ವರ್ಷದ ಅಭಿಯಾನವು 2024ರ ಜನವರಿ 12ರಂದು ಸ್ವಾಮಿ ವಿವೇಕಾನಂದರ ಜಯಂತಿಯ ರಾಷ್ಟ್ರೀಯ ಯುವದಿನದಿಂದ ಪ್ರಾರಂಭವಾಗಿ ಜನವರಿ 26, 2024ರ ಗಣರಾಜ್ಯೋತ್ಸವದ ತನಕ 15 ದಿನಗಳ ಕಾಲ ರಾಜ್ಯಾದ್ಯಂತ ನಡೆಯಲಿದೆ.

th.jpg

Volunteer to make a difference but at your convenience. Your interest can make an impact.



 

th (1).jpg

Make a small contribution today to bring a smile of hope and for the betterment of the society.

Endorsement

Gallery

bottom of page